ವರದಾ ನದಿ ಯು ಮಧ್ಯ ಕರ್ನಾಟಕದ ಒಂದು ನದಿಯಾಗಿದೆ. ಶಿವಮೊಗ್ಗ ಜಿಲ್ಲೆಯ ವರದಮೂಲದಲ್ಲಿ ಉಗಮಿಸುವ ಈ ನದಿಯು ಕರ್ನಾಟಕದ ಹಾವೇರಿ ಹಾಗೂ ಬಳ್ಳಾರಿ ಜಿಲ್ಲೆಗಳ ಮುಖಾಂತರ ಹರಿದು ಹೋಗುತ್ತಾ, ಗಲಗನಾಥ ಸಮೀಪದಲ್ಲಿ ತುಂಗಭದ್ರಾ ನದಿಯನ್ನು ಸೇರುತ್ತದೆ.ವರದಮೂಲ ವನ್ನು ತೀರ್ಥ ಗ್ರಾಮ ಎಂದೂ ಸಹ ಕರೆಯಲಾಗುತ್ತದೆ. ಇದು ತನ್ನ ಹಾದಿಯ ಉದ್ದಕ್ಕೂ ಕನ್ನಡಿಗರ ಯೋಗಕ್ಷೇಮ ಕಾಪಾಡುತ್ತಿದೆ.ಬೇಸಿಗೆಯಲ್ಲಿ ನೀರಾವರಿ ಮತ್ತು ಗೃಹಬಳಕೆ ಉದ್ದೇಶಗಳಿಗೆ ನೀರು ಒದಗಿಸುವ ಸಲುವಾಗಿ ಈ ನದಿಯ ಬಳಿ ಅಣೆಕಟ್ಟುಗಳನ್ನು ನಿರ್ಮಿಸಲಾಗಿದೆ.ಈ ನದಿಯ ಯಾವುದೇ ಪ್ರಮುಖ ನೀರಾವರಿ ಯೋಜನೆಗಳು ಇಲ್ಲ ಆದರೂ ಸರ್ಕಾರ ಪ್ರಾರಂಭಿಸಲು ಯೋಚಿಸುತ್ತಿದೆ.ಇಲ್ಲಿನ ಜನರಿಗೆ ಇದು ದೈವಿಕ ಅಂಶವುಳ್ಳ ನದಿಯಾಗಿದೆ.